Tuesday, April 14, 2009

ತೇಜಸ್ವಿ ನಾವಧೀತಮಸ್ತು..

ಭಾರತೀಯ ವ್ಯವಸ್ಥಾ ಪ್ರಬಂಧ ಸಂಸ್ಥೆ ಬೆಂಗಳೂರು ಎಂದ ಕೂಡಲೇ ಏನೋ ರೋಮಾಂಚನ, ಈಗ ನನಗೆ ಅಲ್ಲಿ ಕಲಿಯುವ ಭಾಗ್ಯ ಒದಗಿ ಬಂದಿದೆ ಎಂದಾಗ ಕನಸೋ, ನಿಜವೋ ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ.

ಎಲ್ಲರೂ 'ತುಂಬಾ ಸಂತೋಷ, ಕೊನೆಗೂ ಸಿಕ್ಕಿತಲ್ಲ', 'ಶುಭಾಶಯಗಳು, ಒಳ್ಳೆದಾಗಲಿ', 'ಒಹೋ ಭಾರಿ ಒಳ್ಳೇ ಸುದ್ಧಿ, ಪಾರ್ಟಿ ಯಾವಾಗ' ಅಂತ ಪಾಟೀ ಸವಾಲು ಹಾಕ್ತ ಇದ್ದಾರೆ. ನನ್ನನ್ನೇ ಕೇಳ್ತಾ ಇದ್ದಾರಾ, ನನಗೆ ಬಂದ ಈಮೇಲ್ ನಿಜವಾಗ್ಲೂ ಅಲ್ಲಿಂದನೇ ಬಂದಿದ್ದ, ನನ್ನ ಕೈ ನಾನೇ ಚಿವುಟಿ ನೋಡಿದ್ದಾಯಿತು. ಹೌದು ನನ್ ಹತ್ರನೇ ಎಲ್ಲ ಕೇಳ್ತಾ ಇರೋದು..

ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ, ಎಲ್ಲರಿಗೂ ಫೋನ್ ಮಾಡಿ ಹೇಳಿದ್ದೂ ಆಯಿತು, ಎಸ್ ಎಂ ಎಸ್ ಮಾಡಿದ್ದೂ ಆಯಿತು.

ಎರಡು ವರ್ಷಗಳ ಶ್ರಮಕ್ಕೆ ಫಲ ಸಿಕ್ಕಿತು. ಇಲ್ಲಿಗೆ, ಒಂದು ತಪಸ್ಸಿಗೆ ಇತಿಶ್ರೀ ಹಾಡುತ್ತ ಇನ್ನೊಂದು ತಪಸ್ಸಿಗೆ ಅಣಿಯಾಗುತ್ತಿದ್ದೇನೆ..

ಏನು ಬಡಬಡಾಯಿಸುತ್ತಿದ್ದಾಳೆ ಅಂದುಕೊಳ್ತಾ ಇದ್ದೀರ, IIM Bangalore ನಲ್ಲಿ MBAಗೆ ಅಡ್ಮಿಶನ್ ಸಿಕ್ತು ಅಂತ ಇದ್ದೀನಿ...

ಜಯವಾಗಲಿ!

-ಸುಪ್ರೀತ

No comments:

Post a Comment