Thursday, March 19, 2009

Are you ready to Vote?

Are you one of those who crib about bad roads and don't know what to do? Are you one of those who wonders where all that tax you pay to the government goes? Do you belong to the group which wonders how you can make a difference in society? Well, here is your chance..

15th Lok Sabha Elections are coming near and those who had missed the bus during the Assembly elections can rectify that and make sure that they vote and make a difference this time. I just got my Voters ID card made today and wanted to post some information to those who want to get their voters ID.

You should fill Form 6(available online and at voters registration centers) and submit to your Voter Facilitation Center along with your address proof and age proof. You will get an acknowledgment for the same. Once you submit the form, your name will be included in the Electoral Roll. When your name appears in the electoral role, you will be given information notices by the Electoral Registration Officers of your area. These notices contain your name and age, house number, constituency number, and polling booth or part number.

You need to go to the registration center (officially called Designated Photographic Locations or DPL)of your ward and get an Electors Photo Identity Card (EPIC) made.

You may register at Jaagore and make use of resources like Form 6, your registration center etc. Jaagore is also running a national campaign aiming to register 1 Billion voters in the next five years and is trying to spread awareness among citizens.

You may also refer to this article and get more information.

Let us all be responsible and choose our leaders with care. This time, cast your vote and make it count.

Haan, inclusion of names in electoral list ends on March 25th, 2009. So hurry!

Supreetha

Wednesday, March 04, 2009

ಸ್ವಲ್ಪ ಹೀಗೆ...

ಕನ್ನಡದಲ್ಲಿ ಬರೆಯಬೇಕು ಅಂತ ಅಂದುಕೊಂಡು ವರ್ಷಗಳೇ ಕಳೆದಿವೆ, ಇನ್ನೂ ಏನು ಬರೆಯಬೇಕು ಎಂಬುದು ನಿರ್ಧಾರ ಮಾಡಿಲ್ಲ. ನಿರ್ಧಾರ ಎನ್ನೋದಕ್ಕೆ ಕನ್ನಡದಲ್ಲಿ ಏನು ಹೇಳೋದು ಅಂತ ಎರಡು ನಿಮಿಷ ಯೋಚ್ನೆ ಮಾಡಿ ನಂತರ ಸುಮಾ ಹತ್ರ ಕೇಳಿ ಬೈಸ್ಕೊಂಡೆ... 'ನಮ್ಮ ಬೆಂಗಳೂರು' ಮಹಿಮೆ ನೋಡಿ! ಬೆಂಗಳೂರಿಗಳಾದ ಮೇಲೆ ಕಂಗ್ಲೀಷ್ ಮಾತಾಡಿ ಅಭ್ಯಾಸ..

ಮೊನ್ನೆ ಹೀಗೇ ಆಯಿತು ನೋಡಿ, ನಾನು ನವೋದಯಕ್ಕೆ ಹೋಗಿದ್ನಾ, ಅಲ್ಲಿ ಪ್ರಾಂಶುಪಾಲರು ಕನ್ನಡದಲ್ಲಿ ಭಾಷಣ ಮಾಡು ಅಂತ ಅಂದುಬಿಟ್ರು. ನಂಗೆ ಒಂದು ಸೆಕೆಂಡ್ ಕಣ್ಣ ಮುಂದೆ ಕತ್ತಲು ಕಟ್ಟಿತು, ಮತ್ತೆ ಶುರು ಹಚ್ಕೊಂಡೆ, ಮಾತಾಡ್ತಾ ಮಾತಾಡ್ತಾ ಇದಕ್ಕೆ ಕನ್ನಡದಲ್ಲಿ ಏನು ಹೇಳೋದು, ಅದಕ್ಕೆ ಕನ್ನಡದಲ್ಲಿ ಏನು ಹೇಳೋದು ಅಂತ ಯೋಚ್ನೆ ಮಾಡ್ತಾ ಮಾತಾಡಿದೆ. ಪಾಪ, ಆ ಮಕ್ಕಳಿಗೆ ಎಷ್ಟು ಅರ್ಥ ಆಯಿತೋ ದೇವರಿಗೇ ಗೊತ್ತು...

ಆಮೇಲೆ ನೂರ್ಜಾಹಾನ್ ಮಿಸ್ ಅಂದ್ರು, ಕನ್ನಡದಲ್ಲಿ ಯಾಕೆ ಬರಿಯಲ್ಲ ನೀನು, ಕನ್ನಡ ಮರೆಯುತ್ತ ಇದ್ದೀಯಾ ಅನ್ಸುತ್ತೆ, ಅಂತ. ಅಯ್ಯೋ ಹೋಗಿ ಮಿಸ್, ಬರೀಬೇಕು ಅಂತ ಯೋಚ್ನೆ ಯಾವತ್ತೂ ಮಾಡ್ತೀನಿ, ಆದ್ರೆ ಟೈಪ್ ಮಾಡ್‌ಬೇಕಲ್ಲ... ಅದಕ್ಕೆ ತುಂಬಾ ಹೊತ್ತು ತಗೊಳ್ಳುತ್ತೆ. ಅಷ್ಟೆಲ್ಲ patience ನಂಗಿಲ್ಲ ಅಂತ. ಅದು ಮಾತ್ರ ಅಲ್ಲ, ದಿನ ಇಡೀ ಆಫೀಸ್ನಲ್ಲಿ ಕೂತು ಆಮೇಲೆ ಮನೆಯಲ್ಲಿ ಕಂಪ್ಯೂಟರ್ ಹತ್ರನು ಸುಳಿಯೊ ಮನಸ್ಸು ಬರಲ್ಲ. ಆಫೀಸ್ನಲ್ಲಿ ಈ ಘನಂದಾರಿ ಕೆಲ್ಸ ಮಾಡಿದ್ರೆ ಒದ್ದು ಓಡಿಸ್ತಾರೆ, 'ಸಾಕಮ್ಮ ನೀನು ಉಪಕಾರ ಮಾಡಿದ್ದು, ಮನೆಯಲ್ಲೇ ಕೂತು ಈ extra curricular activities ಮಾಡು ಅಂತ'.

ಹಾಂ, ಕಂಗ್ಲೀಷ್ ಬಗ್ಗೆ ಹೇಳ್ತಾ ಇದ್ದೆ... ಬೆಂಗ್ಳೂರಿನಲ್ಲಿ ಆಟೋದಲ್ಲಿ ಹೋಗೋವಾಗ ಮಜಾ ಇರುತ್ತೆ. ಬಲಕ್ಕೆ ತಿರುಗಿ ಅಂದ್ರೆ ರೈಟಾ ಲೆಫ್ಟಾ ಮೇಡಮ್ ಅಂತಾರೆ. ಇನ್ನೂ ಕೆಲವರು ಕನ್ನಡದಲ್ಲಿ ಮಾತಾಡಿದ ನಂತರವೂ ಕಹಾನ್ ಜಾನಾ ಹೈ ಮೇಡಮ್ ಅಂತಾರೆ. ಅದು ಹೇಗೆ ಮುಖ ನೋಡಿ ಇವ್ಳು ಕನ್ನಡ ಮಾತಾಡೋಕ್ಕೆ ಫಿಟ್ ಅಲ್ಲ ಅಂತ ನಿರ್ಧಾರ ಮಾಡ್ತಾರೊ!

ಇಲ್ಲಿ ಹಲವೆಡೆ ಬೋರ್ಡ್ ಗಳ ಅವಾಂತರ ಹೇಳತೀರದ್ದು. ಜಯನಗರದಲ್ಲಿ ಇಬ್ರಾಹಿಮ್ಸ್ 'ಇಭ್ರ್ ಹಿಮ್ಸ್' ಆದರೆ ಬ್ರಿಗೇಡ್ ರಸ್ತೆಯಲ್ಲಿ ಅತಿಥಿ 'ಅಥಿತಿ'ಯಾಗಿ ಕನ್ನಡ ಗೊತ್ತಿರೋರಿಗೆ ಒಂದೋ ಕನ್ ಫ್ಯೂಸ್ ಮಾಡುತ್ವೆ, ಇಲ್ಲ ತಲೆ ಚಚ್ಚಿಕೊಳ್ಳೋ ಹಾಗಾಗುತ್ತೆ.... ಇದು ಖಾಲಿ ಸ್ಯಾಂಪಲ್ ಅಷ್ಟೇ, ಲಿಸ್ಟ್ ಮಾಡಿದ್ರೆ ಮುಗಿಲಿಕಿಲ್ಲ(ಬೆಂಗ್ಳೂರ್ ಭಾಷೆಯಲ್ಲಿ 'ಮುಗ್ಯೋದೇ ಇಲ್ಲ')...

ಸಧ್ಯಕ್ಕೆ ಇಷ್ಟು ಸಾಕು, ಆದಷ್ಟು ಬೇಗ ಇನ್ನೊಂದು ಲೇಖನ ಬರೆಯಲು ಪ್ರಯತ್ನಿಸುತ್ತೇನೆ....

ಕನ್ನಡದಲ್ಲಿ ಟೈಪಿಸಲು ಅನುವು ಮಾಡಿಕೊಟ್ಟ http://quillpad.in/ಗೆ ಹೃದಯಪೂರ್ವಕ ಧನ್ಯವಾದಗಳು.

ಜಯವಾಗಲಿ!

-ಸುಪ್ರೀತ