ಕನ್ನಡದಲ್ಲಿ ಬರೆಯಬೇಕು ಅಂತ ಅಂದುಕೊಂಡು ವರ್ಷಗಳೇ ಕಳೆದಿವೆ, ಇನ್ನೂ ಏನು ಬರೆಯಬೇಕು ಎಂಬುದು ನಿರ್ಧಾರ ಮಾಡಿಲ್ಲ. ನಿರ್ಧಾರ ಎನ್ನೋದಕ್ಕೆ ಕನ್ನಡದಲ್ಲಿ ಏನು ಹೇಳೋದು ಅಂತ ಎರಡು ನಿಮಿಷ ಯೋಚ್ನೆ ಮಾಡಿ ನಂತರ ಸುಮಾ ಹತ್ರ ಕೇಳಿ ಬೈಸ್ಕೊಂಡೆ... 'ನಮ್ಮ ಬೆಂಗಳೂರು' ಮಹಿಮೆ ನೋಡಿ! ಬೆಂಗಳೂರಿಗಳಾದ ಮೇಲೆ ಕಂಗ್ಲೀಷ್ ಮಾತಾಡಿ ಅಭ್ಯಾಸ..
ಮೊನ್ನೆ ಹೀಗೇ ಆಯಿತು ನೋಡಿ, ನಾನು ನವೋದಯಕ್ಕೆ ಹೋಗಿದ್ನಾ, ಅಲ್ಲಿ ಪ್ರಾಂಶುಪಾಲರು ಕನ್ನಡದಲ್ಲಿ ಭಾಷಣ ಮಾಡು ಅಂತ ಅಂದುಬಿಟ್ರು. ನಂಗೆ ಒಂದು ಸೆಕೆಂಡ್ ಕಣ್ಣ ಮುಂದೆ ಕತ್ತಲು ಕಟ್ಟಿತು, ಮತ್ತೆ ಶುರು ಹಚ್ಕೊಂಡೆ, ಮಾತಾಡ್ತಾ ಮಾತಾಡ್ತಾ ಇದಕ್ಕೆ ಕನ್ನಡದಲ್ಲಿ ಏನು ಹೇಳೋದು, ಅದಕ್ಕೆ ಕನ್ನಡದಲ್ಲಿ ಏನು ಹೇಳೋದು ಅಂತ ಯೋಚ್ನೆ ಮಾಡ್ತಾ ಮಾತಾಡಿದೆ. ಪಾಪ, ಆ ಮಕ್ಕಳಿಗೆ ಎಷ್ಟು ಅರ್ಥ ಆಯಿತೋ ದೇವರಿಗೇ ಗೊತ್ತು...
ಆಮೇಲೆ ನೂರ್ಜಾಹಾನ್ ಮಿಸ್ ಅಂದ್ರು, ಕನ್ನಡದಲ್ಲಿ ಯಾಕೆ ಬರಿಯಲ್ಲ ನೀನು, ಕನ್ನಡ ಮರೆಯುತ್ತ ಇದ್ದೀಯಾ ಅನ್ಸುತ್ತೆ, ಅಂತ. ಅಯ್ಯೋ ಹೋಗಿ ಮಿಸ್, ಬರೀಬೇಕು ಅಂತ ಯೋಚ್ನೆ ಯಾವತ್ತೂ ಮಾಡ್ತೀನಿ, ಆದ್ರೆ ಟೈಪ್ ಮಾಡ್ಬೇಕಲ್ಲ... ಅದಕ್ಕೆ ತುಂಬಾ ಹೊತ್ತು ತಗೊಳ್ಳುತ್ತೆ. ಅಷ್ಟೆಲ್ಲ patience ನಂಗಿಲ್ಲ ಅಂತ. ಅದು ಮಾತ್ರ ಅಲ್ಲ, ದಿನ ಇಡೀ ಆಫೀಸ್ನಲ್ಲಿ ಕೂತು ಆಮೇಲೆ ಮನೆಯಲ್ಲಿ ಕಂಪ್ಯೂಟರ್ ಹತ್ರನು ಸುಳಿಯೊ ಮನಸ್ಸು ಬರಲ್ಲ. ಆಫೀಸ್ನಲ್ಲಿ ಈ ಘನಂದಾರಿ ಕೆಲ್ಸ ಮಾಡಿದ್ರೆ ಒದ್ದು ಓಡಿಸ್ತಾರೆ, 'ಸಾಕಮ್ಮ ನೀನು ಉಪಕಾರ ಮಾಡಿದ್ದು, ಮನೆಯಲ್ಲೇ ಕೂತು ಈ extra curricular activities ಮಾಡು ಅಂತ'.
ಹಾಂ, ಕಂಗ್ಲೀಷ್ ಬಗ್ಗೆ ಹೇಳ್ತಾ ಇದ್ದೆ... ಬೆಂಗ್ಳೂರಿನಲ್ಲಿ ಆಟೋದಲ್ಲಿ ಹೋಗೋವಾಗ ಮಜಾ ಇರುತ್ತೆ. ಬಲಕ್ಕೆ ತಿರುಗಿ ಅಂದ್ರೆ ರೈಟಾ ಲೆಫ್ಟಾ ಮೇಡಮ್ ಅಂತಾರೆ. ಇನ್ನೂ ಕೆಲವರು ಕನ್ನಡದಲ್ಲಿ ಮಾತಾಡಿದ ನಂತರವೂ ಕಹಾನ್ ಜಾನಾ ಹೈ ಮೇಡಮ್ ಅಂತಾರೆ. ಅದು ಹೇಗೆ ಮುಖ ನೋಡಿ ಇವ್ಳು ಕನ್ನಡ ಮಾತಾಡೋಕ್ಕೆ ಫಿಟ್ ಅಲ್ಲ ಅಂತ ನಿರ್ಧಾರ ಮಾಡ್ತಾರೊ!
ಇಲ್ಲಿ ಹಲವೆಡೆ ಬೋರ್ಡ್ ಗಳ ಅವಾಂತರ ಹೇಳತೀರದ್ದು. ಜಯನಗರದಲ್ಲಿ ಇಬ್ರಾಹಿಮ್ಸ್ 'ಇಭ್ರ್ ಹಿಮ್ಸ್' ಆದರೆ ಬ್ರಿಗೇಡ್ ರಸ್ತೆಯಲ್ಲಿ ಅತಿಥಿ 'ಅಥಿತಿ'ಯಾಗಿ ಕನ್ನಡ ಗೊತ್ತಿರೋರಿಗೆ ಒಂದೋ ಕನ್ ಫ್ಯೂಸ್ ಮಾಡುತ್ವೆ, ಇಲ್ಲ ತಲೆ ಚಚ್ಚಿಕೊಳ್ಳೋ ಹಾಗಾಗುತ್ತೆ.... ಇದು ಖಾಲಿ ಸ್ಯಾಂಪಲ್ ಅಷ್ಟೇ, ಲಿಸ್ಟ್ ಮಾಡಿದ್ರೆ ಮುಗಿಲಿಕಿಲ್ಲ(ಬೆಂಗ್ಳೂರ್ ಭಾಷೆಯಲ್ಲಿ 'ಮುಗ್ಯೋದೇ ಇಲ್ಲ')...
ಸಧ್ಯಕ್ಕೆ ಇಷ್ಟು ಸಾಕು, ಆದಷ್ಟು ಬೇಗ ಇನ್ನೊಂದು ಲೇಖನ ಬರೆಯಲು ಪ್ರಯತ್ನಿಸುತ್ತೇನೆ....
ಕನ್ನಡದಲ್ಲಿ ಟೈಪಿಸಲು ಅನುವು ಮಾಡಿಕೊಟ್ಟ http://quillpad.in/ಗೆ ಹೃದಯಪೂರ್ವಕ ಧನ್ಯವಾದಗಳು.
ಜಯವಾಗಲಿ!
-ಸುಪ್ರೀತ
3 comments:
kannada blog prapanchakke swaagatha... :)
ಧನ್ಯವಾದಗಳು ರವೀಶ್.
ನೀವು ಕನ್ನಡದಲ್ಲಿ ಬರೆಯಬೇಕು ಅಂತ ಅಂದುಕೊಂಡು ವರ್ಷಗಳೇ ಕಳೆದಿವೆ ಎಂದು ಓದಿದಾಗ ,ನನಗೆ ಮತ್ತೆ ನೆನಪಾಯ್ತು ನಾನು ಬರೆಯಬೇಕು ಅಂತ ಇದ್ದ ನನ್ನ ಬ್ಲಾಗ್,ಅಲ್ಲಿ ನಾವು ಹೋದ ಲೆಕ್ಕ ಇಲ್ಲ ದ ಚಾರಣಗಳು,ಹತ್ತಿರುವ ಗುಡ್ಡಗಳು,ಓಡಾಡಿದ ಕಾಡುಗಳು,ನೋಡಿರುವ ಹದಿನೈದಕ್ಕು ಹೆಚ್ಚಿನ ಜಲಪಾತಗಲು..ನಯಾಗ್ರ ಜಲಪಾತ ಇನ್ನೂ ನನ್ನ ಕಣ್ಣ ಮುಂದೆ ಇದೆ...ಇರಲಿ ನಮ್ಮ ಕಥೆ ಸ್ವಲ್ಪಬದಿಯಲ್ಲಿ....
ಮೇಡಮ್..ಆಪ್ತೋ ಕನ್ನಡಮೇ ಭಹ್ತ್ ಅಚ್ಚೆ ಲಿಕ್ತೆಹೋ...ಬೆಂಗ್ಳೂರ್ ಅಂತ ಊರಲ್ಲಿ ,ಕನ್ನಡ ಮಾತಾನಾಡುವರೆ ಕಡಿಮೆ ಇರುವಾಗ..ಕನ್ನಡದಲ್ಲಿ ಬರೆಯುವರಿಗೆ ನನ್ನ ದೊಡ್ಡ ಸಲ್ಯೂಟ್.....
Post a Comment